Chief Editor
Manohar. R (Manu)
Photo Journalist
chitrataramanu@gmail.com
+91 9845549026
ದೇವಿ ನಾಯಕ‌ ನಿರ್ಮಾಪಕ ಯುವ ರೈತ ಚೇತನ್ ರವರಿಂದ ಅರ್ಥಪೂರ್ಣ ದೀಪಾವಳಿ ಪೌರಕಾರ್ಮಿಕರಿಗೆ ಉಡುಗೊರೆ ಇಡೀ ಚಿತ್ರತಂಡಕ್ಕೆ ಹಬ್ಬದ ಬೋನಸ್
Posted date: 09 Mon, Nov 2026 06:15:22 PM
ದೇವಿ ಚಿತ್ರದ ದಿಲ್ದಾರ್ ನಿರ್ಮಾಪಕ ನಾಯಕ  ಡಿಬಾಸ್ ಅಪ್ಪಟ ಅಭಿಮಾನಿ, ಯುವ ರೈತ ಚೇತನ್ ಗೌಡ ರವರು, ದೇವಿ ಸಿನಿಮಾ ಆರಂಭಿಸಿದಾಗಿಂದ್ಲೂ ಒಂದಲ್ಲ ಒಂದು ಕಾರಣಕ್ಕೆ ಸದ್ದು ಸುದ್ದಿಯಲ್ಲಿದ್ದಾರೆ.

ಇದೀಗ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ  ದೀಪಾವಳಿ ಹಬ್ಬವನ್ನ ದೇವಿ ಚಿತ್ರತಂಡ ಅವಿಸ್ಮರಣೀಯವಾಗಿ ಆಚರಿಸಿಕೊಂಡಿದೆ. ಇದಕ್ಕೆ ಕಾರಣ ಯುವ ರೈತ ಚೇತನ್, ರೈತ ಕುಟುಂಬದಿಂದ ಬಂದಿರೋ ಚೇತನ್, ಪೌರಕಾರ್ಮಿಕ‌ ಮಹಿಳಾ ಮಣಿಗಳಿಗೆ ಸೀರೆ ಸಿಹಿ ಹಂಚುವ ಮೂಲಕ ಹಬ್ಬವನ್ನ ಆಚರಿಸಿದ್ದಾರೆ. ಜೊತೆಗೆ  ದೇವಿ ಸಿನಿಮಾಗಾಗಿ ದುಡಿಯುತ್ತಿರುವ ಎಲ್ಲಾ ಶ್ರಮದ ಕೈಗಳಿಗೂ ಖುಷಿಯಾಗುವಷ್ಟು ಬೋನಸ್ ಕೊಟ್ಟು ಮಾದರಿಯಾಗಿದ್ದಾರೆ. 
 
ತುಂಬಾ ಪಾಸಿಟೀವ್ ಎನರ್ಜಿ ತುಂಬಿರೋ ದೇವಿ ಚಿತ್ರದ ನಾಯಕ ಚೇತನ್, ನಾಯಕಿ ಭವ್ಯ ಗೌಡ ,ನಿರ್ದೇಶಕ ಪ್ರಕಾಶ್, ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್, ಸಂಭಾಷಣೆಕಾರ ಮಾಸ್ತಿ ಸೇರಿ ಇಡೀ ಚಿತ್ರತಂಡ ದೇವಿ ಕಚೇರಿಯಲ್ಲಿ ದೀಪಾವಳಿ ಆಚರಿಸ್ತು. ಈ ವೇಳೆ ಇಡೀ ತಂಡ ಮಾಧ್ಯಮದ ಮೂಲಕ ಹಬ್ಬದ ಶುಭಾಶಯದೊಂದಿಗೆ ಚಿತ್ರದ ಈವರೆಗಿನ‌ ಅಪ್ಡೇಟ್ ಕೊಡ್ತು.
 
ಮಂಡ್ಯದಲ್ಲಿ ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದ್ದು, ಅದೇ ಕೊನೆಯ ಹಂತದ ಚಿತ್ರೀಕರಣ ಆಗಿರಲಿದೆ.. ಮಾರ್ಚ್ ವೇಳೆಗೆ ಸಿನಿಮಾ ರಿಲೀಸ್ ಮಾಡೋ ಸನ್ನಾಹದಲ್ಲಿದೆ ಚಿತ್ರತಂಡ.
 
CR ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಯುವ ರೈತ ಚೇತನ್ ಕುಮಾರ್ ಕಥೆ ಚಿತ್ರಕಥೆ ಬರೆದು, ನಟಿಸಿ, ನಿರ್ಮಿಸ್ತಿರುವ ದೇವಿ ಚಿತ್ರವನ್ನ ಪ್ರಕಾಶ್ ನಿರ್ದೇಶನ ಮಾಡ್ತಿದ್ದಾರೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದೇವಿ ನಾಯಕ‌ ನಿರ್ಮಾಪಕ ಯುವ ರೈತ ಚೇತನ್ ರವರಿಂದ ಅರ್ಥಪೂರ್ಣ ದೀಪಾವಳಿ ಪೌರಕಾರ್ಮಿಕರಿಗೆ ಉಡುಗೊರೆ ಇಡೀ ಚಿತ್ರತಂಡಕ್ಕೆ ಹಬ್ಬದ ಬೋನಸ್ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95