Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಟ ಶಿವರಾಜ್ ಕೆ.ಆರ್ ಪೇಟೆ ನಟನೆಯ ವಿಭಿನ್ನ ಕಥೆಯ ``ಹವಾಮಾನ ವರದಿ `` ಟೀಸರ್ ಬಿಡುಗಡೆ
Posted date: 13 Fri, Nov 2026 09:17:59 PM
ನಟ ಶಿವರಾಜ್ ಕೆ.ಆರ್ ಪೇಟೆ ಗೆಳೆಯ ಶರತ್ ಚಕ್ರವರ್ತಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದು ಮತ್ತೊಬ್ಬ ಗೆಳೆಯ  ನಿರ್ಮಾಪಕ ಹರಿಪ್ರಸಾದ್ ಟಿ.ಎಸ್ ಸ್ಬೇಹಿತರ ಜೊತೆಗೂಡಿ ಬಂಡವಾಳ ಹೂಡಿದ್ದಾರೆ . ಹವಾಮಾನ ವರದಿ ಚಿತ್ರದ ಟೀಸರ್ ಬಿಡುಗಡೆ ಬಳಿಕ ಚಿತ್ರತಂಡ ಮಾತಿಗಿಳಿಯಿತು.

ಈ ವೇಳೆ ನಟ ಶಿವರಾಜ್ ಕೆ.ಆರ್ ಪೇಟೆ ಮಾತನಾಡಿ ಚಿತ್ರ ನೈಜವಾಗಿ ಮೂಡಿಬರಲಿ ಎನ್ನುವ ಕಾರಣಕ್ಕೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ನೀರಿನಲ್ಲಿ ಸುಮಾರು 14 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಅಷ್ಟು ದಿನ ನೀರಿನಲ್ಲಿದ್ದರೂ ಯಾರಿಗೂ ತೊಂದರೆ ಆಗಲಿಲ್ಲ. ಇಡೀ ತಂಡ ಶ್ರಮಪಟ್ಟು ಕೆಲಸ ಮಾಡಿದೆ ಸಹಕಾರವಿರಲಿ ಎಂದು ಕೇಳಿಕೊಂಡರು.

ನಾಯಕಿ ನಿರೀಕ್ಷಾ ರಾವ್, ಮಾತನಾಡಿ ಚಿತ್ರಕ್ಕಾಗಿ ಈಜು ಕಲಿತು ನಟಿಸಿದ್ದೇನೆ. ನಿರ್ದೇಶಕ  ಶರತ್ ಚಕ್ರವರ್ತಿ ಶಾಂತ ಸ್ವಭಾವದಲ್ಲಿ ಕೆಲಸ ಮಾಡಿದ್ದಾರೆ. ನಾಯಕ  ಶಿವರಾಜ್ ಸಹಕಾರ ನೀಡಿದ್ದಾರೆ. ಚಿತ್ರದಲ್ಲಿ ಮದುವೆ ಮತ್ತು ನಂತರದಲ್ಲಿ ನನ್ನ ಚೆನ್ನಾಗಿ ಮೂಡಿಬಂದಿದೆ ಎಂದರು 

ನಿರ್ದೇಶಕ ಶರತ್ ಚಕ್ರವರ್ತಿ  ಮಾತನಾಡಿ ಹದಿನೈದು ವರ್ಷದಿಂದ ಸಿನಿಮಾ ಮಾಡುವ ಆಸೆ ಇತ್ತು.‌ ಸ್ನೇಹಿತರು  ಸಿಕ್ಕಾಗ ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಎಲ್ಲರ ಸಹಕಾರ ನೀಡಿದ್ದರಿಂದ ಸಿನಿಮಾ ಮೂಡಿಬಂದಿದೆ. ಮಾದ್ಯಮದ ಸಹಕಾರ ನೀಡಿದರೆ, ಸಿನಿಮಾ ಗೆದ್ದರೆ ಒಂದಷ್ಟು ಸಿನಿಮಾ ಮಾಡುತ್ತೇವೆ.ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ. ವಿತರಕರ ಜೊತೆ ಚರ್ಚೆ ನಡೆಸಿ ಬಿಡುಗಡೆ ದಿನಾಂಕ ಪ್ರಕಟಿಸುವ ಉದ್ದೇಶಹೊಂದಲಾಹಿದೆ ಎಂದು ಹೇಳಿದರು.

ನಿರ್ಮಾಪಕ ಹರಿಪ್ರಸಾದ್ ಟಿ.ಎಸ್ ಮಾತನಾಡಿ  ಸಹಕಾರ ಹಾರೈಕೆ ಇರಲಿ, ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು

ಚಿತ್ರಕ್ಕೆ ದಿವ್ಯ ವಿನಯ್ ಕುಮಾರ್, ಪ್ರತಿಭಾ ಅಶ್ವತ್ಥಾಮ, ಹೆಚ್.ಆರ್ ರಘು ಬಂಡವಾಳ ಹಾಕಿದ್ದಾರೆ.
ಹೃದಯ ಶಿವ ಹಾಡುಬರೆದಿದ್ಸಾರೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಟ ಶಿವರಾಜ್ ಕೆ.ಆರ್ ಪೇಟೆ ನಟನೆಯ ವಿಭಿನ್ನ ಕಥೆಯ ``ಹವಾಮಾನ ವರದಿ `` ಟೀಸರ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95